Sunday, February 11, 2018

Fried corn poha chivda/ ಕರಿದ ಮೆಕ್ಕೆಜೋಳದ ಚೂಡಾ

Fried corn poha chivda/ 

ಕರಿದ ಮೆಕ್ಕೆಜೋಳದ ಚೂಡಾ


ಅವಲಕ್ಕಿ ಚೂಡಾ ಅಥವಾ ಚುರಮುರಿ ಚೂಡಾ ತಿಂದು ಬೇಸರವಾಗಿದ್ದಲ್ಲಿ ಈ ಮೆಕ್ಕೆಜೋಳದ ಚೂಡಾ ಖಂಡಿತ ವಾಗಿಯೂ  ಒಂದು  ಒಳ್ಳೆಯ ಚೂಡಾ ಪ್ರಕಾರ ಅಂತ ಹೇಳಬಹುದು. 
ಸಾಮಗ್ರಿ 
ಮೆಕ್ಕೆಜೋಳದ  ಅವಲಕ್ಕಿ (ಹಸಿದು) 200 ಗ್ರಾಮ 
ಕರಿಯಲು ಎಣ್ಣೆ
ಶೇಂಗಾ 2 tbsp
ಪುಠಾಣಿ1 tbsp
ಖಾರದ ಪುಡಿ 1 tbsp
ಉಪ್ಪು
ಸಕ್ಕರೆ 2 tsp
ಕರಿಬೇವು  ಎಲೆಗಳು
ಲಿಂಬುಫೂಲ(citric powder) ಚಿಟಿಕೆ
ವಿಧಾನ
ಸಕ್ಕರೆ ಮತ್ತು ಲಿಂಬುಫೂಲ ಮಿಕ್ಸರ್ ನಲ್ಲಿ ಪುಡಿ ಮಾಡಿ ಇಟ್ಟು ಕೊಂಡಿರಿ.
 ಬಾಣಲಿ ಕಾಯಲು ಇಟ್ಟು  ಅದರಲ್ಲಿ ಕರಿಯಲು ಬೇಕಾಗುವಷ್ಟು ಎಣ್ಣೆ ಹಾಕಿ.
ಎಣ್ಣೆ ಕಯ್ದ ನಂತರ  ಜಾಲರಿಯ ಸಹಾಯದಿಂದ  ಸ್ವಲ್ಪ  ಸ್ವಲ್ಪ ವಾಗಿ  ಮೆಕ್ಕೆಜೋಳದ  ಹಸಿ ಅವಲಕ್ಕಿ ಯನ್ನು  ಕರಿದು  ಒಂದು  ಕಾಗದದ ಮೇಲೆ ಹರಡಿ
ನಂತರ ಒಂದೊಂದಾಗಿ  ಶೇಂಗಾ, ಪುಠಾಣಿ, ಕರಿಬೇವು ಎಣ್ಣೆ ಯಲ್ಲಿ  ಕರಿದು ಕೊಳ್ಳಿ.
ಕರಿದ  ಎಲಎಲ್ಲಾ ಪದಾಪದಾರ್ಥಗಳಿಗೆ  ಪುಡಿ ಮಮಾಡಿಕೊಂಡ  ಸಕ್ಕರೆ, ಖಾರದ ಪುಡಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
ಸರಿಯಾಗಿ  ಕಲಿಸಿದರೆ  ಕರಿದ ಮೆಕ್ಕೆಜೋಳದ ಚೂಡಾ  ಸವಿಯಲು ಸಿದ್ಧ.